ಆಹಾರದ ಹಕ್ಕಿಗಿಂತ ಗೋವಿನ ಬದುಕುವ ಹಕ್ಕು ದೊಡ್ಡದು
ಗೋವಿಗೆ ಪರ್ಯಾವಿಲ್ಲ, ಆಹಾರಕ್ಕೆ ಬಳಸುವವನಿಗೆ ಪರ್ಯಾಯ ಆಹಾರ ನೀಡಬಹುದಾಗಿದೆ. ಆಹಾರದ ಹಕ್ಕಿಗಿಂತ ಗೋವಿನ ಬದುಕುವ ಹಕ್ಕು ಬಹಳ ದೊಡ್ಡದು. ಗೋವಿಗೆ ಸರಿಮಿಗಿಲಾದ ಇನ್ನೊಂದು ಜೀವವನ್ನು ಪ್ರಪಂಚದಲ್ಲಿ ವಿಜ್ಞಾನಿಗಳಿ ಇದ್ದರೆ ತೋರಿಸಲಿ. ಒಂದು ದಿನ ಕೆಂಪುಕೋಟೆಯ ಮೇಲೆ ಕಾಮಧೇನುವಿನ ಧ್ವಜ ಹಾರಿ, ಗೋಮಾತೆಯ ಅಂಕಿತದಲ್ಲಿ ಆಡಳಿತ ನಡೆಸುವ ಸುಧಿನ ಬರಬೇಕಾಗಿದೆ. ಕಾರ್ಯ ಸಾಧನೆಗೆ ಕಠಿಣ ಸಾಧನೆ ಬೇಕಾಗಿದೆ ಎಂದು ಶ್ರೀರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಜಿಗಳು ಹೇಳಿದರು.
ಅವರು ಭಾನುವಾರ ರಾಜರಾಜೇಶ್ವರಿನಗರ ಬಿ. ಇ. ಎಂ. ಎಲ್. ಬಡಾವಣೆಯ ಬಾಲಕೃಷ್ಣ ರಂಗಮಂದಿರದಲ್ಲಿ ನಡೆದ ಅಭಯಾಕ್ಷರ – ಹಾಲುಹಬ್ಬ ಕಾರ್ಯಕ್ರಮದಲ್ಲಿ ದಿವ್ಯ ಸಾನಿಧ್ಯ ವಹಿಸಿ ಆಶೀರ್ವವನ ನೀಡಿದರು.
ಗೋವಿನ ಪಾದದ ಧೂಳಿನ ಮುಂದೆ ಅಧಿಕಾರ ಯಾವ ಲೆಕ್ಕವಲ್ಲ. ಲಾಭ ಬರುವ ಒಂದೇ ಒಂದು ಕೆಲಸವನ್ನು ಮಠ ಎಲ್ಲೂ ಮಾಡುತ್ತಿಲ್ಲ. ದೇಶೀ ಗೋಮಾತೆ ಕೃಪೆ ಸಮಾಜಕ್ಕೆ ನಿತ್ಯ ಇರಬೇಕು. ಗೋರಕ್ಷಣೆ ಎಂಬುದು ಉಸಿರು, ಸರ್ವಸ್ವ ಇದಕ್ಕಾಗಿ ಎಂಥ ಹೋರಾಟಕ್ಕಾದರೂ ಸಿದ್ದ. ಗೋ ಹತ್ಯೆ ಹಿಂದೆ ಇರುವ ಲಾಭಿಯಲ್ಲಿ ಭಾಗಿಯಾಗಿರುವವರು ಎಂಥಹಾ ಕೆಟ್ಟಕೆಲಸಕ್ಕೂ ಸಿದ್ದರಿದ್ದಾರೆ. ಇದಕ್ಕೆಲ್ಲದಕ್ಕೂ ಸಿದ್ದವಿದ್ದಾಗ ಮಾತ್ರ ಗೋ ರಕ್ಷಣೆಯ ಹೋರಾಟದಲ್ಲಿ ಭಾಗವಹಿಸಬಹುದು ಎಂದು ತಿಳಿಸಿದರು.
ಜತ್ತಿನ ಎಲ್ಲರಿಗೆ ಎಲ್ಲರಿಗಿಂತ ಹೆಚ್ಚು ಉಪಕಾರ ಮಾಡಿದ ಗೋ ಮಾತೆಗೆ ಎಲ್ಲರಿಗಿಂತ ಹೆಚ್ಚಿನ ತೊಂದರೆಯಾಗುತ್ತಿದೆ. ಹಾಲಿನ ಹೆಸರಿನಲ್ಲಿ ಶತಕೋಟಿ ಭಾರತೀಯರು ಹಾಲಾಹಲ ಸೇವನೆ ಮಾಡುತ್ತಿರುವುದು ದುರದೃಷ್ಟಕರ. ತಾಯಿ – ಧರ್ಮ – ದೇಶಕ್ಕಾಗಿ ಸಂತರೂ ಯುದ್ಧ ಭೂಮಿಯಲ್ಲಿ ಇಳಿಯಬಹುದಾಗಿದೆ. ತಾಯಿಯ ತಾಯಿಯನ್ನು ಉಳಿಸುವ ನಿಟ್ಟಿನಲ್ಲಿ ಸನ್ಯಾಸಿಗಳೂ ಶಸ್ತ್ರಕೈಗೆತ್ತಿಕೊಳ್ಳವ ಅನಿವಾರ್ಯತೆ ಎದುರಾಗಿದೆ. ಗೋವಿನ ಮೇಲಿನ ಕ್ರೌರ್ಯ ರಾವಣನ ರಾಜ್ಯದಲ್ಲೂ ನಡೆಯುತ್ತಿರಲಿಲ್ಲ. ಸಮಾಜಿಕ ಜಾಲತಾಣ ಸಮಯ ಕಳೆಯುವ ಸಾಧನವಾಗದೆ, ಅಕ್ಷರ ಸಮರದ ತಾಣವಾಗಿ ಬರಬೇಕಾಗಿದೆ ಎಂದು ತಿಳಿಸಿದರು.
ಬೆಂಗಳೂರು ಓಂಕಾರ ಆಶ್ರಮದ ಶ್ರೀ ಮಧಿಸೂದನಂದ ಸ್ವಾಮೀಜಿಗಳು ಆಶೀರ್ವಚನ ನೀಡಿ ಜನರ ಸುಖಃಕ್ಕೋಸ್ಕರ ತನ್ನನ್ನು ತಾನು ತೊಡಗಿಸಿಕೊಂಡು ಗೋವಿನ ಹೋರಾಟಕ್ಕೆ ರಾಘವೇಶ್ವರ ಶ್ರೀಗಳು ಮುಂದಾಗಿದ್ದಾರೆ. ವಿಷವನ್ನುಂಡು ಅಮೃತವನ್ನು ನೀಡುವ ಗೋಮಾತೆಯ ಉಳಿವಿಗೆ ಪಡತೊಡಬೇಕಾಗಿದೆ. ನಮ್ಮ ದೇಶದ ತಳಿಗಳನ್ನು ಉಳಿಸಿಕೊಳ್ಳುವ ಕಾರ್ಯವಾಗಬೇಕು. ಧನವನ್ನು ಧರ್ಮಕ್ಕೆ ವಿನಿಯೋಗಿಸಿದಾಗ ಆನಂದ, ನೆಮ್ಮದಿ ನಮ್ಮಲ್ಲಿ ನೆಲೆಸುತ್ತದೆ. ಈ ಭಾಗದಲ್ಲಿ ನಡೆದ ೯೦ಸಾವಿರ ಸಹಿ ೯೦ಲಕ್ಷ ಬೇಗ ಪೂರೈಸುವಂತಾಗಲಿ ಎಂದು ಹರಿಸಿದರು.
ಗೋಧ್ವಜಾರೋಹಣ ಮಾಡಿದ ಮಾಜಿ ಸದಸ್ಯರು ಹಾಗೂ ಬಿಬಿಎಂಪಿ ಸ್ಥಾಯಿ ಸಮಿತಿ ಬೃಹತ್ ಕಾಮಗಾರಿ ಅಧ್ಯಕ್ಷರು ಜಿ. ಎಚ್. ರಾಮಚಂದ್ರ ಮಾತನಾಡಿ ಬದುಕಿನಲ್ಲಿ ದೇಶಕ್ಕೆ – ಜನತೆಗೆ ಮಾಡಿದ ಕಾರ್ಯ ಶಾಶ್ವತವಾಗಿ ನೆನಪಿನಲ್ಲಿ ಉಳಿಯುತ್ತದೆ. ಸರ್ಕಾರ ಮಾಡುವ ಕೆಲಸ ಕಾರ್ಯಕ್ಕಿಂತ ಹೆಚ್ಚಿನ ಕಾರ್ಯವನ್ನು ಮಠ ಮಂದಿರಗಳು ಮಾಡುತ್ತಿವೆ. ಅವರಿಗೆ ಬೆಂಬಲವಾಗಿ ನಿಂತು ದೇಶ ಉಳಿಸುವ ಕಾರ್ಯ ಮಾಡಬೇಕು ಎಂದು ತಿಳಿಸಿದರು.
ಸಮಾಜ ಸೇವಕ ಸಿ. ಆರ್. ಉಮಾಶಂಕರ ಮಾತನಾಡಿ ಗೋ ಹತ್ಯೆ ನಿಷೇಧ ಕಾನೂನು ಜಾರಿಯಾಗಿದೆ ಎಂಬ ಮಾಹಿತಿ ಆಧರಿಸಿ ಬುದ್ದಿಜೀವಿಗಳು, ವಿದ್ಯಾವಂತರು ರಸ್ತೆಯಲ್ಲಿ ಕುಳಿತು ಗೋ ಮಾಂಸ ಭಕ್ಷಣೆಗೆ ಮುಂದಾಗಿರುವುದು ನಮ್ಮ ದೌರ್ಭಾಗ್ಯ. ಗೋಸಂರಕ್ಷಣೆಯ ಕಾರ್ಯದಲ್ಲಿ ಪ್ರತಿಯೊಬ್ಬರು ಪಾಲ್ಗೊಳ್ಳಬೇಕಾದ ಅನಿವಾರ್ಯತೆ ಇದೆ ಎಂದು ಹೇಳಿದರು.
ನಗರಸಭಾ ಮಾಜಿ ಸದಸ್ಯ ಎಂ ಮಂಜು ಮಾತನಾಡಿ ಗೋಹತ್ಯೆಯನ್ನು ಮುಂದುವರಿಸಿಕೊಂಡು ಹೋದಲ್ಲಿ ಹಿಂದುಗಳ ಹತ್ಯೆ ನಡೆದರೂ ಅಚ್ಚರಿ ಇಲ್ಲ. ಹೋರಾಟಕ್ಕೆ ಮುಂದಾಳುತ್ವ ಬೇಕಾಗಿದ್ದು, ಸ್ವಾಮೀಜಿಯವರು ತೆಗೆದುಕೊಂದಿರುವುದು ಯಶಸ್ವಿಯ ಸೂಚನೆ. ಈ ಬಡವಾಣೆಯಲ್ಲಿ ಯಾವುದೇ ಗೋವಿನ ಹತ್ಯ ನಡೆಯುತ್ತಿಲ್ಲ ಮತ್ತು ಎಲ್ಲರೂ ಸುಖರವಾಗಿದ್ದೇವೆ ಎಂದು ತಿಳಿಸಿದರು.
ಐಡಿಎಲ್ ಹೋಮ್ ಸೊಸೈಟಿ ಉಪಾಧ್ಯಕ್ಷ ಎಂ ರಾಜಕುಮಾರ್ ಮಾತನಾಡಿ ಹಸು ಕಡಿಯುವವನು ಗೋವಿನ ಮಹತ್ವ ಹಾಗೂ ರೈತರ ಅಗತ್ಯಗಳ ಬಗ್ಗೆ ಅರಿತಾಗ ಸರ್ಕಾರದ ಬಳಿ ಈ ರೀತಿಯಲ್ಲಿ ಹೋಗಬೇಕಾದ ಅನಿವಾರ್ಯತೆ ಇಲ್ಲ. ನಿಜವಾದ ಪ್ರೀತಿಯಲ್ಲಿ ಇಂತಹ ಕಾರ್ಯಕ್ರಮದಲ್ಲಿ ಜನರು ಭಾಗವಹಿಸಿದಾಗ ಯಶಸ್ವಿಯಾಗುತ್ತದೆ ಎಂದರು.
ಕಸಾಪ ರಾಜರಾಜೇಶ್ವರೀನಗರದ ಅಧ್ಯಕ್ಷ ಪುಟ್ಟೇಗೌಡರು ಮಾತನಾಡಿ ಗೋವಿನ ಕಣ್ಣೀರಿನ ಮಹತ್ವ ಆಳುವ ಪ್ರಭುಗಳಿಗೆ ಅರ್ಥವಾಗಬೇಕಾಗಿದೆ. ಗೋ ಮಾತೆ ರಕ್ಷಣೆಯ ಕಾರ್ಯವಾಗದಿರುವುದರಿಂದ ಭೀಕರ ಕಾಯಿಲೆಗಳು ಕಾಣಿಸುತ್ತಿದೆ. ಎರಡು ಲಕ್ಷ ಸಹಿ ಸಂಗ್ರ ಮಾಡುವ ಕಾರ್ಯವನ್ನು ಈ ಭಾಗದಿಂದ ಮಾಡಲಾಗುವುದು ಎಂದು ತಿಳಿಸಿದರು.
ನಿವೃತ್ತ ಹಣಕಾಸು ಕಾರ್ಯದರ್ಶಿ ಎಂ. ಎಸ್. ಶ್ರೀರಾಮ್, ನಗರ ಸಭಾ ಸದಸ್ಯ ಶಶಿಕಾಂತ್ ರಾವ್, ಲೋಕೇಶ್, ಸಮಾಜ ಸೇವಕ ನಾಗರಾಜ್ ಗಟ್ಟಿಗೆರೆ, ಕಾಂತ್ ರಾಜ್, ಶ್ಯಾಮ್, ಗಂಗಾಧರ ಉಪಸ್ಥಿತರಿದ್ದರು.
ಗೋಕಿಂಕರರು ಸಂಗ್ರಹಿಸಿದರ ೪೫ ಸಾವಿರ ಮಂದಿ ಸಹಿ ಹಾಗೂ ಎಂಟನೇ ತರಗತಿ ವಿದ್ಯಾರ್ಥಿನಿ ಪ್ರಣತಿ ಸಂಗ್ರಹಿಸಿದ ೧೦೦೧ ಮಂದಿಯ ಸಹಿಯನ್ನು ಶ್ರೀಗಳಿಗೆ ಸಮರ್ಪಣೆ ಮಾಡಲಾಯಿತು. ಮಾಗೋ ಪ್ರಾಡಕ್ಟ್ಸ್‌ನ ನೂತನ ವಲ್ಲಭಘೃತ ಔಷಧವನ್ನು ಬಿಡುಗಡೆಗೊಳಿಸಲಾಯಿತು.
ಎಲ್ ಕೆ ಜಿ ಯಿಂದ ಹತ್ತನೇ ತರಗತಿ ಮಕ್ಕಳಿಗೆ ಹಸುವಿನ ಚಿತ್ರಕ್ಕೆ ಬಣ್ಣ ತುಂಬುವ ಚಿತ್ರಕಲಾ ಸ್ಪರ್ಧೆಯಲ್ಲಿ ೪೦೦ ವಿದ್ಯಾರ್ಥಿಗಳು ಭಾವಹಹಿಸಿ ಬಹುಮಾನ ವಿತರಿಸಲಾಯಿತು. ಎಲ್ ಕೆ ಜಿ ಹಾಗೂ ೧ನೇ ತರಗತಿ ವಿಭಾಗದಲ್ಲಿ ಅಥರ್ವ್ ವೇದರಾಜ್ ಪ್ರಥಮ, ಅನರ್ಘ್ಯ ಎಚ್ ಆರ್ ದ್ವಿತೀಯ, ೨ರಿಂದ ೪ನೇ ತರಗತಿ ವಿಭಾಗದಲ್ಲಿ ಸಿಂಧು ಪ್ರಥಮ, ಲಹರಿ ಬಿಎನ್ ದ್ವಿತೀಯ, ೫ರಿಂದ ೭ನೇ ತರಗತಿ ವಿಭಾಗದಲ್ಲಿ ತರುಣ್ ಪ್ರಥಮ, ಮೈಥಿಲಿ ದ್ವಿತೀಯ, ೮ರಿಂದ ೧೦ನೇ ತರಗತಿ ವಿಭಾಗದಲ್ಲಿ ಕುಶುಭು ಪ್ರಥಮ, ತರುಣ್ ಶ್ರೀನಿವಾಸ್ ದ್ವಿತೀಯ ಸ್ಥಾನ ಗಳಿಸಿದರು.
ದೀಪಿಕಾ ಗೋಪದ ಹಾಡಿದರು. ಬೆಂಗಳೂರು ಮಂಡಲ ಅಧ್ಯಕ್ಷ ಯುಎಸ್‌ಜಿ ಭಟ್ ಸಭಾ ಪೂಜೆ ನಡೆಸಿದರು. ವಿದ್ವಾನ್ ಜಗದೀಶ ಶರ್ಮಾ ಪ್ರಾಸ್ತಾವಿಕವಾಗಿ ಮಾತನಾಡಿದರು. ಎಸ್ ಜಿ ಭಟ್ ಕಬ್ಬಿನಗದ್ದೆ, ಕೃಷ್ಣಾನಂದ ಶರ್ಮ ಕಾರ್ಯಕ್ರಮ ನಿರೂಪಿಸಿದರು.

Leave a Comment