ಏಡ್ಸ್ ಮಹಾಮಾರಿಗೆ ಗೋವಿನಲ್ಲಿ ಪರಿಹಾರ: ರಾಘವೇಶ್ವರ ಶ್ರೀ

ವಿಜಯಾಬ್ಯಾಂಕ್ ಕಾಲೋನಿಯ ಆಟದ ಮೈದಾನದಲ್ಲಿ ನಡೆದ ಅಭಯಾಕ್ಷರ ಹಾಲುಹಬ್ಬ ಕಾರ್ಯಕ್ರಮ

ಬೆಂಗಳೂರು: ಏಡ್ಸ್‍ಗೆ ಪರಿಹಾರ ಗೋವಿನಲ್ಲಿದೆ ಎನ್ನುವುದನ್ನು ಅಮೆರಿಕದ ಟೆಕ್ಸಾಸ್ ಎಎನ್‍ಎಂ ವಿಶ್ವವಿದ್ಯಾನಿಲಯದ ಸಂಶೋಧಕರುಕಂಡುಹಿಡಿದಿದ್ದಾರೆ ಎಂದು ಶ್ರೀರಾಮಚಂದ್ರಾಪುರಮಠದ ಶ್ರೀಶ್ರೀರಾಘವೇಶ್ವರಭಾರತೀಸ್ವಾಮೀಜಿ ಹೇಳಿದರು.

ಶನಿವಾರ ಬನ್ನೇರುಘಟ್ಟ ರಸ್ತೆಯ ವಿಜಯಾಬ್ಯಾಂಕ್ ಕಾಲೋನಿಯ ಆಟದ ಮೈದಾನದಲ್ಲಿ ನಡೆದ ಅಭಯಾಕ್ಷರ ಹಾಲುಹಬ್ಬ ಕಾರ್ಯಕ್ರಮದಲ್ಲಿಸ್ವಾಮೀಜಿ ಆಶೀರ್ವಚನ ನೀಡಿದ ಅವರು, “ಟೆಕ್ಸಾಸ್ ಎಎನ್‍ಎಂ. ಇಂಟರ್‍ನ್ಯಾಷನಲ್ ಏಡ್ಸ್ ಪ್ರಿವೆನ್ಷನ್ ಇನೀಶಿಯೇಟಿವ್ ವಿವಿ, ಸ್ಕ್ರಿಪ್ಸ್ಸಂಶೋಧನಾ ಕೇಂದ್ರದ ಸಂಶೋಧಕರು ಈ ಕುರಿತ ನಿರ್ಧಾರಕ್ಕೆ ಬಂದಿದ್ದಾರೆ. ಕರುವಿನ ಶರೀರಕ್ಕೆ ಏಡ್ಸ್ ವೈರಸ್‍ಗಳನ್ನು ನೀಡಿದಾಗ, ಅದುಕರುವಿನ ಶರೀರದಲ್ಲಿ ಬದುಕುವುದಿಲ್ಲ ಎನ್ನುವುದನ್ನು ವಿಜ್ಞಾನಿಗಳು ಸಂಶೋಧನೆ ಮೂಲಕ ದೃಢಪಡಿಸಿದ್ದಾರೆ. ಈ ಪ್ರತಿರೋಧವನ್ನು ಹಸುವಿನಶರೀರದಿಂದ ಪ್ರತ್ಯೇಕಿಸಿ, ಲಸಿಕೆರೂಪದಲ್ಲಿ ನೀಡಬಹುದು ಎಂದು ಸಾಬೀತುಪಡಿಸಿದ್ದಾರೆ” ಎಂದು ವಿವರಿಸಿದರು.

ನೇಚರ್ ನಿಯತಕಾಲಿಕದಲ್ಲಿ ಪ್ರಕಟವಾದ ಲೇಖನವನ್ನು ಉಲ್ಲೇಖಿಸಿ ಫೈನಾನ್ಶಿಯಲ್ ಟೈಮ್ಸ್ ವರದಿ ಮಾಡಿರುವುದನ್ನು ಸ್ವಾಮೀಜಿಉದಾಹರಿಸಿದರು. ಏಡ್ಸ್ ನಿಯಂತ್ರಿಸುವ ರೋಗನಿವಾರಕ ಶಕ್ತಿ ಗೋಮೂತ್ರ, ಗೋಮಯ, ಗೋವಿನ ಹಾಲಿನಲ್ಲಲ್ಲ; ಗೋವಿನ ಶರೀರದಲ್ಲಿದೆಎಂದು ಹೇಳಿದರು.

ನಮ್ಮ ದೇಶದ ಅತ್ಯುತ್ತಮ ತಳಿಗಳ ಮೇಲೆ ಈ ಪರೀಕ್ಷೆ ಮಾಡಿದರೆ, ನೂರು ಪಟ್ಟು ಉತ್ತಮ ಫಲಿತಾಂಶ ಪಡೆಯಬಹುದು ಎಂದುಅಭಿಪ್ರಾಯಪಟ್ಟರು. ಗೋವುಗಳನ್ನು ಉಳಿಸಿಕೊಳ್ಳುವುದು ಕೋಮುವಾದ, ಅಂದಾಭಿಮಾನ ಅಥವಾ ಮೂಢನಂಬಿಕೆಯೇ ಎಂದು ಪ್ರಶ್ನಿಸಿದರು.

ಸರ್ಕಾರಗಳೇ ಕಸಾಯಿಖಾನೆಗಳನ್ನು ಪೋಷಿಸಲು ನಿಂತಿದೆ. ಮಾಂಸದ ಲಾಬಿ ಎಲ್ಲೆಡೆ ಕೈಚಳಕ ತೋರಿಸುತ್ತಿದೆ. ಇದರ ವಿರುದ್ಧ ಹೋರಾಟಮಾಡಿ ಗೋವನ್ನು ಉಳಿಸಿಕೊಳ್ಳುವುದು ಸವಾಲಿನ ಕೆಲಸ. ವಿನೋಬಾಭಾವೆಯವರ ದೇಹಾಂತವಾಗಿರುವುದು ಗೋವಿನ ಕಾರಣಕ್ಕೆ. ರಾಜೀವ್ದೀಕ್ಷಿತ್ ಅವರ ಅಸಹಜ ಮರಣಕ್ಕೂ ಇದೇ ಕಾರಣ. ಇಂಥ ಹಲವಾರು ಮಂದಿ ಗೋಪರ ಹೋರಾಟಗಾರರು ಇಂಥ ಲಾಬಿಗಳ ಕಾರಣದಿಂದಕಷ್ಟ ನಷ್ಟ ಅನುಭವಿಸಿದ್ದಾರೆ. ಗೋವಿನ ಸಮಸ್ಯೆಗೆ ಪರಿಹಾರ ಇರುವುದು ಜನರ ಬಳಿ. ಆದ್ದರಿಂದ ಜನರ ಬಳಿಗೆ ಮಠ ತೆರಳಿ, ಗೋಜಾಗೃತಿಮೂಡಿಸುವ ಪ್ರಯತ್ನ ಇದು ಎಂದು ವಿವರಿಸಿದರು. ಅಧಿಕಾರಿಗಳು, ರಾಜಕಾರಣಿಗಳು ವಿಷಚಕ್ರದಿಂದ ಹೊರಬಂದು ಜನಚಳವಳಿ ಕಟ್ಟೋಣ.ಗೋರಕ್ಷಣೆ ನಾವು ಬೇಡುವ ಭಿಕ್ಷೆಯಲ್ಲ; ಅದು ಭಾರತದ ಪ್ರಜೆಗಳ ಹಕ್ಕೊತ್ತಾಯ ಎಂದು ವಿಶ್ಲೇಷಿಸಿದರು.

ಕಿಂಚಿತ್ ಸ್ವಾರ್ಥವೂ ಇಲ್ಲದ ನಿಜವಾದ ಅಮ್ಮ. ಗೋಸೇವೆಗೆ ಮುಂದಾಗುವ ಎಲ್ಲರೂ ನಿಜವಾದ ತಾಯಿಯ ನಿಜವಾದ ಮಕ್ಕಳು. ತಾಯಿಗೆ ಕಷ್ಟಬಂದಾಗ ಸ್ಪಂದಿಸದ ಯಾರೂ ನಿಜವಾದ ಮಕ್ಕಳಲ್ಲ. ಹೆತ್ತಮ್ಮನ ಕರೆಗೆ ಸ್ಪಂದಿಸಿ ದೊಡ್ಡ ಸಂಖ್ಯೆಯ ಮಕ್ಕಳು ಸೇರಿದ್ದೀರಿ ಎಂದು ಹೇಳಿದ್ದಾರೆ. ಗೋಮಾತೆಯ ಎಲ್ಲ ಅಂಶಗಳೂ ಭೂಮಿಗೆ ಸೇರಿದರೆ ಭೂಮಿಯಲ್ಲಿ ಚಿನ್ನ ಬೆಳೆಯುತ್ತದೆ. ಬಂಜರು ಭೂಮಿಯನ್ನು ಹಸಿರಾಗಿಸುತ್ತದೆ. ಗೋವನ್ನುಉಳಿಸುವುದೇ ಭೂಮಿಗೆ ನೀಡಬಹುದಾದ ದೊಡ್ಡ ಕೊಡುಗೆ ಎಂದು ಬಣ್ಣಿಸಿದರು.

ಶಾಸಕ ಸತೀಶ್ ರೆಡ್ಡಿ ಮಾತನಾಡಿ, ವ್ಯವಸಾಯ ಬೆಂಗಳೂರಿನಿಂದ ನಶಿಸಿದ್ದು, ಬೆಂಗಳೂರು ಐಟಿ-ಬಿಟಿ ಹಬ್ ಆಗಿ ಬೆಳೆಯುತ್ತಿದೆ. ಆದರೆಎಲ್ಲರೂ ಹಳ್ಳಿಗಳಿಂದ ಬಂದವರೇ. ಎಲ್ಲರೂ ಗೋವಿನ ಹಾಲು ಕುಡಿದು ಬಂದವರೇ. ಆದರೆ ಇಂದು ಸರ್ಕಾರಗಳು ಗೋರಕ್ಷಣೆಗೆ ಒತ್ತು ನೀಡುವಬದಲು ಗೋವುಗಳನ್ನು ಕಸಾಯಿಖಾನೆಗೆ ಕಳುಹಿಸುವ ಕಾರ್ಯಕ್ಕೆ ಕುಮ್ಮಕ್ಕು ನೀಡುತ್ತಿವೆ. ಗೋವಿನ ಮೇಲೆ ಕ್ರೌರ್ಯ ಹೆಚ್ಚುತ್ತಿದೆ. ಭಾರತದಸಂಸ್ಕøತಿಯನ್ನು ಒಡೆಯುವ ಹುನ್ನಾರ ನಡೆದಿದೆ. ಆದರೆ ಇದನ್ನು ಕಾಪಾಡಲು ಸಾಧುಸಂತರು ಗಣನೀಯ ಸೇವೆ ಸಲ್ಲಿಸುತ್ತಿದ್ದಾರೆ. ಗೋವಧೆಗೆಪ್ರೋತ್ಸಾಹಿಸುವ ಸರ್ಕಾರಗಳಿಗೆ ತಕ್ಕ ಪಾಠ ಕಲಿಸಿ ಎಂದು ಕರೆ ನೀಡಿದರು.

ರಾಜ್ಯಾದ್ಯಂತ ರೈತರು ಕಂಗಾಲಾಗಿದ್ದಾರೆ. ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಪಶುಪಾಲನೆಗೆ ಪ್ರೋತ್ಸಾಹ ನೀಡುವ ಮೂಲಕ ರೈತರ ನೆರವಿಗೆಸರ್ಕಾರಗಳು ಬರಬೇಕು. ಗೋಸಂರಕ್ಷಣೆಗೆ ಪೂರಕವಾಗುವ ಕಟ್ಟುನಿಟ್ಟಿನ ಕಾನೂನು ಜಾರಿಗೆ ಬರಬೇಕು ಎಂದು ಆಗ್ರಹಿಸಿದರು. ಯಾವಸರ್ಕಾರಗಳೂ ಧರ್ಮ ಹಾಗೂ ಸಂಸ್ಕøತಿ ಜತೆ ಚೆಲ್ಲಾಟವಾಡಬಾರದು ಎಂದು ಮನವಿ ಮಾಡಿದರು. ಹಾಲುಹಬ್ಬದಂಥ ಕಾರ್ಯಕ್ರಮಗಳುಗೋಸಂರಕ್ಷಣೆಗೆ ಪ್ರೇರಕಶಕ್ತಿಯಾಗಲಿ ಎಂದು ಆಶಿಸಿದರು.

ಹಾಲುಹಬ್ಬ ಸಂಚಾಲನಾ ಸಮಿತಿ ಕಾರ್ಯಾಧ್ಯಕ್ಷ ಸುಖಾನಂದ ಶೆಟ್ಟಿ, ಶ್ರೀಧರ ಹೆಗಡೆ ಗೋಸಂದೇಶ ನೀಡಿದರು. ಸುರೇಂದ್ರ ಶೆಟ್ಟಿ, ಪಾಲಿಕೆಸದಸ್ಯರು, ಪಾಲಿಕೆ ಸದಸ್ಯ ನಾರಾಯಣರಾಜು, ಮಾಜಿ ಸದಸ್ಯ ಚಂದ್ರಶೇಖರರಾಜು, ವಿರೇಂದ್ರ ಶೆಟ್ಟಿ, ಲೋಕೇಶ್, ಶ್ರೀಧರಮೂರ್ತಿ, ಚಂದ್ರುಶಾನುಭಾಗ್ ಮತ್ತಿತರರು ಉಪಸ್ಥಿತರಿದ್ದರು. ಗೋಕಿಂಕರ ಕವಚವನ್ನು ಶಾಸಕ ಸತೀಶ್ ರೆಡ್ಡಿಯವರಿಗೆ ತೊಡಿಸುವ ಮೂಲಕ ಶ್ರೀ ಸ್ವಾಮೀಜಿಲೋಕಾರ್ಪಣೆ ಮಾಡಿದರು.

ಶ್ರೀಶ್ರೀ ರಾಘವೇಶ್ವರಭಾರತೀಮಹಾಸ್ವಾಮೀಜಿಯವರ ವಿಶಿಷ್ಟ ಪರಿಕಲ್ಪನೆಯಾದ ಅಭಯಾಕ್ಷರ- ಹಾಲುಹಬ್ಬ, ವಾರಾಂತ್ಯದಲ್ಲಿ ರಾಜಧಾನಿಯಜನರಿಗೆ ವಿಶಿಷ್ಟ ಅನುಭವ ನೀಡಿತು. ಗೋಪೂಜೆ, ಗೋದೀಕ್ಷೆ, ಅಕ್ಷರದೀಕ್ಷೆ, ಗೋಗ್ರಾಸ, ಗೋವಿಚಾರ, ಪ್ರಸ್ತುತಿ, ಅಭಯಾಕ್ಷರ, ಗೋಕಲೆ, ಗವ್ಯೋತ್ಪನ್ನಗಳ ಪ್ರದರ್ಶನ ಮತ್ತು ಮಾರಾಟ, ರಥಯಾತ್ರೆಯನ್ನೊಳಗೊಂಡ ವಿಶಿಷ್ಟ ಕಾರ್ಯಕ್ರಮ ಜನಮನ ಸೂರೆಗೊಂಡಿರು.

ಕಾರ್ಯಕ್ರಮದಲ್ಲಿ ಪಾಲ್ಗೊಂಡ ಸಾವಿರಾರು ಮಂದಿಗೆ ಪರಿಶುದ್ಧ ದೇಸಿಹಾಲಿನ ಅಮೃತವನ್ನು ಉಚಿತವಾಗಿ ವಿತರಿಸಲಾಯಿತು. ಗಾಯಕಶಶಿಧರ ಕೋಟೆ ಗೋವಿನ ಬಗ್ಗೆ ಸ್ವರಚಿತ ಗೀತೆ ಹಾಡಿದರು. ಕಾರ್ಯಕ್ರಮಕ್ಕೆ ಮುನ್ನ ಸುತ್ತಮುತ್ತಲ ಪ್ರದೇಶಗಳಲ್ಲಿ ಎತ್ತಿನಗಾಡಿಗಳ ಮೆರವಣಿಗೆಮತ್ತು ಗೋರಥ ಸಂಚರಿಸಿ ಗೋಜಾಗೃತಿ ಮೂಡಿಸಿತು.

Leave a Comment