ಅಭಯಚಾತುರ್ಮಾಸ್ಯದ ಎರಡನೆಯ ದಿನ ಶ್ರೀಪರಿವಾರದ(ಶ್ರೀಗಳ ಸೇವೆಯಲ್ಲಿ ಇರುವವರು) ಸದಸ್ಯರಿಂದ ಶ್ರೀರಾಮಸೇವೆ-ಗೋಸೇವೆ-ಶ್ರೀಗುರುಭಿಕ್ಷಾಸೇವೆ ಸಹಿತ ಸರ್ವಸೇವೆ ನೆರವೇರಿತು. ಈ ಸಂದರ್ಭದಲ್ಲಿ ಹಿಂದಿನ ಪೀಠಾಧಿಪತಿಗಳ ಕಾಲದಲ್ಲಿ ಸೇವೆಸಲ್ಲಿಸಿದವರು, ಪ್ರಕೃತ ಪೀಠಾಧಿಪತಿಗಳ ಸೇವೆಯಲ್ಲಿ ತೊಡಗಿಸಿಕೊಂಡವರು ಉಪಸ್ಥಿತರಿದ್ದು, ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀಮಹಾಸ್ವಾಮಿಗಳಿಗೆ ಫಲಸಮರ್ಪಣೆ ಮಾಡಿದರು.

ಅಭ್ಯಾಗತರಾಗಿ ಆಗಮಿಸಿದ್ದ ಶ್ರೀಕ್ಷೇತ್ರ ಸಿಗಂಧೂರಿನ ಪ್ರಧಾನ ಅರ್ಚಕರಾದ ಶ್ರೀ ಶೇಷಗಿರಿಭಟ್ ದಂಪತಿಗಳು, ಉತ್ತರಕನ್ನಡ ಜಿಲ್ಲಾಪಂಚಾಯತಿ ಸದಸ್ಯರಾದ  ಶ್ರೀಕಲಾ ಶಾಸ್ತ್ರಿ ದಂಪತಿಗಳು ಹಾಗೂ ಶ್ರೀಪರಿವಾರದ ಹಿರಿಯ ಸದಸ್ಯರಾದ ಶ್ರೀ ಕೆ ವಿ ರಮೇಶ್ ಅವರು ’ಅಭಯಾಕ್ಷರ’ ಹಸ್ತಾಕ್ಷರವನ್ನು ಮಾಡಿ ಶ್ರೀಗಳಿಗೆ ಸಮರ್ಪಿಸಿದರು.

ಶ್ರೀಕರಾರ್ಚಿತ ಪೂಜೆ, ಕುಂಕುಮಾರ್ಚನೆ, ಶಿವಪಂಚಾಕ್ಷರಿ ಸ್ತೋತ್ರಪಠಣ,ಅಭಯಂಕರ ಮಂತ್ರ ಹವನ ಮುಂತಾದ ಧಾರ್ಮಿಕ ಕಾರ್ಯಕ್ರಮಗಳು ಎಂದಿನಂತೆ ನಡೆದವು, ಕೃಷ್ಣ ಯಜುರ್ವೇದ ಪಾರಾಯಣ ಇಂದಿನಿಂದ ಆರಂಭವಾಗಿದ್ದು, ವಾರಗಳ ಕಾಲ ಪಾರಾಯಣ ನಡೆಯಲಿದೆ.

Leave a Comment