ಹಾಲುಹಬ್ಬ – ಟಿ ದಾಸರಹಳ್ಳಿ

ಕಟುಕರಿಂದ ರಕ್ಷಿಸಿ ಕಾಯುವ ಕೈಗೆ ಗೋವುಗಳನ್ನು ಒಪ್ಪಿಸೋಣ : ರಾಘವೇಶ್ವರ ಶ್ರೀ * 1,15,000 ಅಭಯಾಕ್ಷರ ಅರ್ಜಿಗಳನ್ನು ಶ್ರೀಗಳಿಗೆ ಸಮರ್ಪಿಸಲಾಯಿತು. * ಶಾಸಕ ಮುನಿರಾಜು, ಯೋಗಗುರುಗಳಾದ ಉಮಾಮಹೇಶ್ವರ್ ಉಪಸ್ಥಿತಿ. ನಮ್ಮೆಲ್ಲರ ಬದುಕಿನ ಹಿಂದೆ ಮೌನದಲ್ಲಿ ಮಾತಾಡುವ ಗೋಮಾತೆ ಇದ್ದಾಳೆ. ಸಕಲ ಶುಭಗಳ ಸಾಗರ ಗೋಮಾತೆಯಾಗಿದ್ದಾಳೆ ಎಂದು ಶ್ರೀರಾಮಚಂದ್ರಾಪುರಮಠದ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳು ಹೇಳಿದರು. ಟಿ.ದಾಸರಹಳ್ಳಿಯ ವಾಸ್ಕ್ ಯೋಗಕೇಂದ್ರದಲ್ಲಿ ನೆಡೆದ ಅಭಯಾಕ್ಷರ ಹಾಲುಹಬ್ಬ ಕಾರ್ಯಕ್ರಮವನ್ನುದ್ದೇಶಿಸಿ ಗೋಸಂದೇಶ ನೀಡಿದ ರಾಘವೇಶ್ವರ ಶ್ರೀಗಳು, ಗೋವಿನ ಪರ ಹಲವರು, ಗೋವಿನ ವಿರುದ್ಧ ಇರುವವರು ಕೆಲವರು…

Read More

ಹಾಲುಹಬ್ಬ – ಕೆಂಪೇಗೌಡನಗರ

ರಾಷ್ಟ್ರದ ನೆಲಕ್ಕೆ ಒಂದು ಬಿಂದು ಕೂಡಾ ಗೋವಿನ ರಕ್ತ ಬೀಳದಂಥ ದಿನ ಬರಲಿ : ರಾಘವೇಶ್ವರಶ್ರೀ * ರಾಷ್ಟ್ರಸಂತ ಲಲಿತಪ್ರಭ ಸಾಗರ್, ಶ್ರೀ ವಿದ್ಯಾಭಿನವ ಶಂಕರಭಾರತೀಸ್ವಾಮೀಜಿ ಉಪಸ್ಥಿತಿ ಬೆಂಗಳೂರು: ದೇಶದ ಸ್ವಾತಂತ್ರ್ಯದ ಕಿಡಿ ಆರಂಭವಾದದ್ದೇ ಗೋವಿನ ಕಾರಣದಿಂದ. ಆದರೆ ಅಂಥ ಪವಿತ್ರ ಭಾರತದಲ್ಲಿ ಇಂದು ಗೋವಧೆಜನ್ಯ ವಸ್ತುಗಳ ಬಳಕೆ ಅವ್ಯಾಹತವಾಗಿ ನಡೆದಿದೆ. ಇದು ನಿಂತರಷ್ಟೇ ದೇಶಕ್ಕೆ ಭವಿಷ್ಯ. ಆದ್ದರಿಂದ ಗೋವಧೆಜನ್ಯ ವಸ್ತುಗಳನ್ನು ತಿರಸ್ಕರಿಸೋಣ ಎಂದು ಶ್ರೀರಾಮಚಂದ್ರಾಪುರಮಠದ ಶ್ರೀಶ್ರೀರಾಘವೇಶ್ವರಭಾರತೀಸ್ವಾಮೀಜಿ ಕರೆ ನೀಡಿದರು. ಕೆಂಪೇಗೌಡನಗರದ ಉದಯಭಾನು ಆಟದ ಮೈದಾನದಲ್ಲಿ ಭಾನುವಾರ…

Read More

ಹಾಲುಹಬ್ಬ – ಜಯನಗರ

ತಳಿಸಂಕರ ವಿರುದ್ಧ ಜನಾಂದೋಲನ: ರಾಘವೇಶ್ವರ ಶ್ರೀ * ಅಭಯಾಕ್ಷರಕ್ಕೆ ಸಾರಿಗೆ ಸಚಿವ ರಾಮಲಿಂಗ ರೆಡ್ಡಿ ಸಹಿ – ಗೋಸಂದೇಶ * ನಿವೃತ್ತ ಐಜಿಪಿ, ಕೆ.ವಿ.ರವೀಂದ್ರನಾಥ್ ಠ್ಯಾಗೋರ್, ಅಸ್ಸಾಂನ ದಿಲೀಪ್ ಕುಮಾರ್ ದಾಸ್ ಉಪಸ್ಥಿತಿ ಬೆಂಗಳೂರು: ಗೋಹತ್ಯೆ ಮತ್ತು ತಳಿಸಂಕರಗಳ ಎಡಕತ್ತರಿಯಿಂದ ಇಡೀ ಗೋವಂಶಕ್ಕೆ ಅಪಾಯ ಬಂದಿದೆ. ಈ ಎರಡು ಪಿಡುಗುಗಳ ವಿರುದ್ಧ ಮಾಡು ಇಲ್ಲವೇ ಮಡಿ ಹೋರಾಟಕ್ಕೆ ಬದ್ಧ ಎಂದು ಶ್ರೀರಾಮಚಂದ್ರಾಪುರ ಮಠದ ಶ್ರೀಶ್ರೀರಾಘವೇಶ್ವರಭಾರತೀಸ್ವಾಮೀಜಿ ನುಡಿದರು. ಜಯನಗರದಲ್ಲಿ ಆಯೋಜಿಸಿದ್ದ ಅಭಯಾಕ್ಷರ- ಹಾಲುಹಬ್ಬ ಕಾರ್ಯಕ್ರಮದಲ್ಲಿ ಶ್ರೀಗಳು ಆಶೀರ್ವಚನ ನೀಡಿದರು. ಇಂಥ ತಳಿಸಂಕರದಿಂದ…

Read More

ಕಟುಕರ ಪಾಲಾಗುವ ಗೋವುಗಳಿಗೆ ರಕ್ಷೆ  – ವಿಶಿಷ್ಟ ಅಭಯ ಜಾತ್ರೆಗೆ ಚಾಲನೆ

* ಗುಜರಾತ್‍ನ ಅಹ್ಮದಾಬಾದ್,ಮೈಸೂರು, ಗದಗ,  ಸೇರಿದಂತೆ ವಿವಿಧ ಕಡೆಗಳಿಂದ ಆಗಮಿಸಿದ ಗ್ರಾಹಕರು ಭಾರತೀಯ ಗೋಸಂಪತ್ತನ್ನು ಸಂರಕ್ಷಿಸುವ ಮಹದುದ್ದೇಶದ ಅಭಯ ಜಾತ್ರೆಗೆ ಹನೂರು ತಾಲೂಕು ಕೆಂಪಯ್ಯನಹಟ್ಟಿಯಲ್ಲಿ ಶುಕ್ರವಾರ ಚಾಲನೆ ನೀಡಲಾಯಿತು.ದೇಸಿ ಹಸುಗಳ ವಹಿವಾಟಿಗೆ ಮಾತ್ರ ಇಲ್ಲಿ ಅವಕಾಶವಿದ್ದು, ಕಟುಕರಿಗೆ ಪ್ರವೇಶವಿಲ್ಲದ ದೇಶದ ಮೊಟ್ಟಮೊದಲ ಜಾನುವಾರು ಜಾತ್ರೆ ಎನಿಸಿಕೊಂಡಿದೆ. ರೈತರಿಂದ ನೇರವಾಗಿ ರೈತರು ಅಥವಾ ಅಧಿಕೃತ ಗೋಶಾಲೆಗಳಿಗಾಗಿ ಗೋವು ಖರೀದಿಸಲು ಮಾತ್ರ ಇಲ್ಲಿ ಅವಕಾಶವಿದೆ. ಗ್ರಾಮಪಂಚಾಯ್ತಿ ಅಧ್ಯಕ್ಷೆ ನೀಲಮ್ಮ ಗೋಪೂಜೆ ನೆರವೇರಿಸಿ ಗೋಗ್ರಾಹ ನೀಡುವ ಮೂಲಕ ಅಭಯ ಜಾತ್ರೆಗೆ ಚಾಲನೆ ನೀಡಿದರು. ಶ್ರೀರಾಮಚಂದ್ರಾಪುರ…

Read More

ಹಾಲುಹಬ್ಬ – ರಾಜರಾಜೇಶ್ವರಿನಗರ

ಆಹಾರದ ಹಕ್ಕಿಗಿಂತ ಗೋವಿನ ಬದುಕುವ ಹಕ್ಕು ದೊಡ್ಡದು ಗೋವಿಗೆ ಪರ್ಯಾವಿಲ್ಲ, ಆಹಾರಕ್ಕೆ ಬಳಸುವವನಿಗೆ ಪರ್ಯಾಯ ಆಹಾರ ನೀಡಬಹುದಾಗಿದೆ. ಆಹಾರದ ಹಕ್ಕಿಗಿಂತ ಗೋವಿನ ಬದುಕುವ ಹಕ್ಕು ಬಹಳ ದೊಡ್ಡದು. ಗೋವಿಗೆ ಸರಿಮಿಗಿಲಾದ ಇನ್ನೊಂದು ಜೀವವನ್ನು ಪ್ರಪಂಚದಲ್ಲಿ ವಿಜ್ಞಾನಿಗಳಿ ಇದ್ದರೆ ತೋರಿಸಲಿ. ಒಂದು ದಿನ ಕೆಂಪುಕೋಟೆಯ ಮೇಲೆ ಕಾಮಧೇನುವಿನ ಧ್ವಜ ಹಾರಿ, ಗೋಮಾತೆಯ ಅಂಕಿತದಲ್ಲಿ ಆಡಳಿತ ನಡೆಸುವ ಸುಧಿನ ಬರಬೇಕಾಗಿದೆ. ಕಾರ್ಯ ಸಾಧನೆಗೆ ಕಠಿಣ ಸಾಧನೆ ಬೇಕಾಗಿದೆ ಎಂದು ಶ್ರೀರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಜಿಗಳು ಹೇಳಿದರು. ಅವರು…

Read More

ಹಾಲುಹಬ್ಬ – ಮಹಾಲಕ್ಷ್ಮಿಪುರಂ

ಇ-ವಾರಪತ್ರಿಕೆ ‘ಗೋವಾಣಿ’ ಲೋಕಾರ್ಪಣೆ ಪ್ರಾಣ ಕೊಟ್ಟಾದರೂ ಗೋವಿನ ಪ್ರಾಣ ಉಳಿಸಲು ಪಣ: ರಾಘವೇಶ್ವರ ಶ್ರೀ * ಹರಿಹರಪುರ ಶ್ರೀ, ಆವನಿ ಶೃಂಗೇರಿ ಶ್ರೀ, ಶಾಸಕ ಗೋಪಾಲಯ್ಯ, ನಟರಾದ ಅಜಯ್ ರಾವ್ ಉಪಸ್ಥಿತಿ ಬೆಂಗಳೂರು: ಮಲೆಮಹದೇಶ್ವರ ಬೆಟ್ಟದ ಒಂದೇ ಒಂದು ಗೋವು ಕೂಡಾ ಕಟುಕರ ಪಾಲಾಗದಂತೆ ತಡೆಯಲು ತಮಿಳುನಾಡಿನ ಆಡಿಜಾತ್ರೆಗೆ ಪರ್ಯಾಯವಾಗಿ ಹನೂರು ತಾಲೂಕು ಕೆಂಪಯ್ಯನಹಟ್ಟಿಯಲ್ಲಿ ಅಭಯ ಜಾತ್ರೆಯನ್ನು ಈ ತಿಂಗಳ 11ರಿಂದ 13ರವರೆಗೆ ಹಮ್ಮಿಕೊಳ್ಳಲಾಗಿದೆ ಎಂದು ಶ್ರೀರಾಮಚಂದ್ರಾಪುರಮಠದ ಶ್ರೀಶ್ರೀರಾಘವೇಶ್ವರಭಾರತೀಸ್ವಾಮೀಜಿ ಪ್ರಕಟಿಸಿದರು. ಮಹಾಲಕ್ಷ್ಮಿಪುರಂ ವಿವೇಕಾನಂದ ಮೈದಾನದಲ್ಲಿ ನಡೆದ ಅಭಯಾಕ್ಷರ-…

Read More

ಹಾಲುಹಬ್ಬ – ಜೆ. ಪಿ. ನಗರ

ದೇಶ, ಮನುಕುಲದ ಉಳಿವಿಗೆ ಗೋರಕ್ಷಣೆ: ರಾಘವೇಶ್ವರ ಶ್ರೀ ಬೆಂಗಳೂರು: ದೇಶ, ಸಂಸ್ಕøತಿ ಮತ್ತು ಮನುಕುಲದ ಉಳಿವಿಗಾಗಿ ಗೋಸಂತತಿ ಉಳಿವು ಅನಿವಾರ್ಯ ಎಂದು ಶ್ರೀರಾಮಚಂದ್ರಾಪುರಮಠದ ಶ್ರೀಶ್ರೀರಾಘವೇಶ್ವರಭಾರತೀಸ್ವಾಮೀಜಿ ನುಡಿದರು. ನಗರದ ಜೆ.ಪಿ.ನಗರದಲ್ಲಿ ನಡೆದ ಅಭಯಾಕ್ಷರ- ಹಾಲುಹಬ್ಬ ಸಮಾರಂಭದಲ್ಲಿ ಶ್ರೀಗಳು ಆಶೀರ್ವಚನ ನೀಡಿದರು. ರೈತರು ಹಾಗೂ ಗೋವು ಇಲ್ಲದಿದ್ದರೆ, ದೇಶಕ್ಕೆ ಅನ್ನ- ಹಾಲು ಇಲ್ಲ. ಇದನ್ನು ಅರ್ಥ ಮಾಡಿಕೊಂಡು ಗೋಸಂರಕ್ಷಣೆಗೆ ಒತ್ತು ನೀಡಬೇಕು. ಗೋವಿನ ಉಳಿವಿಗಾಗಿ ಪ್ರತಿಯೊಬ್ಬರೂ ಗೋದೀಕ್ಷೆ, ಅಕ್ಷರದೀಕ್ಷೆ ಪಡೆದು ಕೈಜೋಡಿಸಬೇಕು ಎಂದು ಆಶಿಸಿದರು. ಈ ವಿಶಿಷ್ಟ ಅಭಯಾಕ್ಷರ ಅಭಿಯಾನ…

Read More

ಹಾಲುಹಬ್ಬ : 23-07-2017

ಗೋವಧೆಜನ್ಯ ವಸ್ತು ತಿರಸ್ಕರಿಸಲು ರಾಘವೇಶ್ವರ ಶ್ರೀ ಕರೆ * ಫಲಿಮಾರು ಶ್ರೀ, ವಿ ಮನೋಹರ್, ದೊಡ್ಡರಂಗೇಗೌಡ, ರವಿಸುಬ್ರಹ್ಮಣ್ಯ ಉಪಸ್ಥಿತಿ ಬೆಂಗಳೂರು: ಗೋವಧೆಜನ್ಯ ವಸ್ತುಗಳನ್ನು ತಿರಸ್ಕರಿಸುವ ಮೂಲಕ ಗೋಹತ್ಯೆಯ ದಂಧೆಯನ್ನು ಸೋಲಿಸುವ ಬೃಹತ್ ಆಂದೋಲನಕ್ಕೆ ದೇಶ ಸಜ್ಜಾಗಬೇಕು ಎಂದು ಶ್ರೀರಾಮಚಂದ್ರಾಪುರ ಮಠದ ಶ್ರೀಶ್ರೀರಾಘವೇಶ್ವರಭಾರತೀಸ್ವಾಮೀಜಿ ನುಡಿದರು. ಬಸವನಗುಡಿ ಬಳಿಯ ಕೆಂಪೇಗೌಡ ಆಟದ ಮೈದಾನದಲ್ಲಿ ಹಮ್ಮಿಕೊಂಡಿದ್ದ ಅಭಯಾಕ್ಷರ- ಹಾಲುಹಬ್ಬ ಉತ್ಸವದಲ್ಲಿ ಅವರು ಆಶೀರ್ವಚನ ನೀಡಿದರು. ಮನೆಯಲ್ಲಿ ಗೋಪಾಲನೆ, ಅದು ಸಾಧ್ಯವಾಗದಿದ್ದರೆ ಗೋಪಾಲನೆಗೆ ನೆರವು ನೀಡುವುದು ಅಥವಾ ಗೋಧನದ ಹುಂಡಿ ಇಡುವುದು, ಗವ್ಯೋತ್ಪನ್ನ ಬಳಕೆ, ಗೋವಧೆಯಿಂದ ಬರುವ ಉತ್ಪನ್ನಗಳನ್ನು ತಿರಸ್ಕರಿಸುವ, ಗೋಕಿಂಕರರಾಗಿ ಸೇವೆ ಸಲ್ಲಿಸುವ ಮೂಲಕ ಅಥವಾ ಅಭಯಾಕ್ಷರಕ್ಕೆ ಸಹಿ ಮಾಡುವ ಸಪ್ತಸೂತ್ರಗಳ ಮೂಲಕ ಗೋರಕ್ಷಣೆಗೆ ಮುಂದಾಗಬೇಕು ಎಂದು ಕರೆ ನೀಡಿದರು. ಎಲ್ಲ ದಿವ್ಯಗಳು ಇರುವುದು ಗೋವಿನ ದೇಹದಲ್ಲಿ; ಶುಭ, ಒಳಿತು ಎಲ್ಲವೂ ಇರುವ ಜೀವ ಗೋಮಾತೆ. ಗೋಮಾತೆ ಇಂದು ಅಪಾಯದಲ್ಲಿದ್ದಾಳೆ. ಗೋವಿನ ಬಗ್ಗೆ, ಸಾತ್ವಿಕತೆ ಬಗ್ಗೆ, ಭಾರತೀಯತೆ ಬಗ್ಗೆ ಇಡೀ ಸಮಾಜಕ್ಕೆ ಚಿಂತೆ ಇದೆ. ಈ ಚಿಂತೆ ದೂರವಾಗಬೇಕು ಎಂದು ಅಭಿಪ್ರಾಯಪಟ್ಟರು. ಗೋಜನ್ಯ ವಸ್ತುಗಳ ಬಳಕೆ ಮನುಷ್ಯನ ಮೈ, ಮನಕ್ಕೆ ಅಮೃತದ ಆಹ್ವಾನ. ಗವ್ಯೋತ್ಪನ್ನ ಬಳಕೆಯಿಂದ ಬರುವ ಆದಾಯದ ಪ್ರತಿ ರೂಪಾಯಿಯೂ ಗೋಸೇವೆಗೆ ಮೀಸಲು ಎಂದರು. ಗೋಪಾಲನೆಯ ಸಪ್ತಸೂತ್ರಗಳನ್ನು ಅನುಸರಿಸಿದಲ್ಲಿ ಭಾರತದ ಭವಿಷ್ಯ ಭವ್ಯವಾಗಲಿದೆ. ಗೋವಿನ ಜತೆಗೆ ಹಾಸುಹೊಕ್ಕಾದ ಬದುಕು ಶ್ರೇಷ್ಠ. ಗೋವಿನ ದಿವ್ಯತೆಯ ಪ್ರಭೆಯಲ್ಲಿ ಬದುಕುವುದು ಅದೃಷ್ಟ ಎಂದು ಬಣ್ಣಿಸಿದರು, ಅಭಯಾಕ್ಷರ ಆಂದೋಲನದ ಮೂಲಕ ದೇಶದ ಪ್ರತಿಯೊಬ್ಬ ನಾಗರಿಕ ತನ್ನ ಹಕ್ಕೊತ್ತಾಯ ಮಂಡಿಸಬೇಕು. ಇದಕ್ಕೆ ರಾಜ್ಯದ ಉತ್ತಮ ರಾಜಕಾರಣಿಗಳು, ಅಧಿಕಾರಿಗಳು ಕೈಜೋಡಿಸಬೇಕು. ಏಳು ದಶಕಗಳ ಕಾಲ ಸರ್ಕಾರಗಳಿಂದ ಸಾಧ್ಯವಾಗದ್ದನ್ನು ಮಾಡಿತೋರಿಸೋಣ ಎಂದರು. ಉಡುಪಿ ಫಲಿಮಾರು ಮಠದ ವಿದ್ಯಾಧೀಶ ಶ್ರೀಪಾದಂಗಳವರು ಆಶೀರ್ವಚನ ನೀಡಿ, “ಗೋವಿನ ಮೇಲೆ ಕ್ರೌರ್ಯ ಎಸಗುವವರು ಮುಂದಿನ ಜನ್ಮದಲ್ಲಿ ತಾವು ಹಸುವಾದರೆ ಏನಾಗಬಹುದು ಎಂಬ ಪ್ರಶ್ನೆ ಹಾಕಿಕೊಳ್ಳಲಿ. ಇದಕ್ಕೆ ರಾಜಕೀಯದಲ್ಲಿ ಉತ್ತರವಿಲ್ಲ” ಎಂದು ಹೇಳಿದರು, ತಾಯಿಗೆ ವಯಸ್ಸಾಯಿತು ಎಂದು ವಧಾಲಯಕ್ಕೆ ಕಳುಹಿಸುತ್ತೇವೆಯೇ? ಅಂತೆಯೇ ಗೋಮಾತೆಯನ್ನು ಕಳುಹಿಸುವುದೂ ಅಪರಾಧ ಎಂದು ವಿಶ್ಲೇಷಿಸಿದರು. ಗೋವನ್ನು ವಧಾಲಯಕ್ಕೆ ಕಳುಹಿಸುವವರು ಖಂಡಿತಾ ಮನುಷ್ಯರಲ್ಲ ಎಂದರು. ಆದರೆ ಗೋಮೂತ್ರ, ಗೋಮಯದಲ್ಲಿರುವ ಔಷಧ ಗುಣಗಳನ್ನು ಪ್ರಚುರಪಡಿಸಿದವರಲ್ಲಿ ಶ್ರೀರಾಮಚಂದ್ರಾಪುರ ಮಠ ಮುಂಚೂಣಿಯಲ್ಲಿದೆ ಎಂದು ಬಣ್ಣಿಸಿದರು. ದೊಡ್ಡರಂಗೇಗೌಡ ಮಾತನಾಡಿ, “ವಿಚಾರವಾದಿಗಳು, ಬುದ್ಧಿಜೀವಿಗಳು ಪ್ರಚಾರಕ್ಕಾಗಿ ಗೋಹತ್ಯೆ ಬೆಂಬಲಿಸುವ ಮೂಲಕ ದಾಷ್ಟ್ರ್ಯ ಮೆರೆದಿದಿದ್ದಾರೆ. ಇವರು ವಿಚಾರವಾದಿಗಳೋ ಬುದ್ಧಿಹೀನರೋ ಎಂದು ನೀವೇ ನಿರ್ಧರಿಸಿ. ಇಂಥವರು ಹೇಗೆ ತಮ್ಮ ಪ್ರಶಸ್ತಿಗಳನ್ನು ಪಡೆದರು ಎನ್ನುವುದು ಎಲ್ಲರಿಗೂ ಗೊತ್ತು” ಎಂದು ಚುಚ್ಚಿದರು. ಸಾಹಿತಿ, ಶಿಲ್ಪಿಗಳು, ಪ್ರಾಜ್ಞರಿಗೆ ಸಮಾಜ ಉತ್ತಮ ಸ್ಥಾನ ನೀಡುತ್ತಿದೆ. ಆದರೆ ಬುದ್ಧಿಜೀವಿಗಳ ಹೆಸರಿನಲ್ಲಿ ವಿಕೃತಿ ಮೆರೆಯುತ್ತಿದ್ದಾರೆ. ಸಮಾಜಕ್ಕೆ ಇತ್ಯಾತ್ಮಕ ಸಂದೇಶ ಸಾರುವ ಒಳ್ಳೆಯ ಬುದ್ಧಿ ಇನ್ನಾದರೂ ಇವರಿಗೆ ಬರಲಿ. ಗೋಹತ್ಯೆ ವಿಕೃತಿಯ ಕ್ರೌರ್ಯ. ಗೋಮಾಂಸ ಭಕ್ಷಣೆ ಅನಾಗರಿಕ ಲಕ್ಷಣ. ಸನಾತನ ಪರಂಪರೆ ಉಳಿಸುವ ನಿಟ್ಟಿನಲ್ಲಿ ಹಾಲುಹಬ್ಬದಂಥ ಕಾರ್ಯಕ್ರಮಗಳು ಕನ್ಯಾಕುಮಾರಿಯಿಂದ ಕಾಶ್ಮೀರದ ವರೆಗೆ ಮುನ್ನಡೆಯಲಿ ಎನ್ನುವುದು ಎಲ್ಲ ಸಹೃದಯರ ಆಶಯ ಎಂದು ಬಣ್ಣಿಸಿದರು. ಗೋವಿನ ಕುರಿತ ಸ್ವ-ರಚಿತ ಕವನವನ್ನು ದೊಡ್ಡರಂಗೇಗೌಡ ವಾಚಿಸಿದರು. “ಗೋರಕ್ಷಣೆ ಮತ್ತು ಗೋಭಕ್ಷಣೆ ನಡುವಿನ ಹೋರಾಟ ನಡೆಯುತ್ತಲೇ ಇದೆ. ಗೋಪ್ರೇಮ ಮನಸ್ಸಲ್ಲೇ ಹುಟ್ಟಿ ಬರುವಂತೆ ಮಾಡುವ ವಿಶಿಷ್ಟ ಕಾರ್ಯಕ್ರಮ ಹಾಲುಹಬ್ಬ, ಗೋಜನ್ಯ ಉತ್ಪನ್ನದಿಂದ ಜೀವನ ಮಾಡಬಹುದು. ಗೋಹತ್ಯೆ ಮಾಡಿದರೆ ಅದು ಚಿನ್ನದ ಮೊಟ್ಟೆ ಇಡುವ ಕೋಳಿಯ ಕಥೆಯಂತಾಗುತ್ತದೆ” ಎಂದು ಖ್ಯಾತ ಸಂಗೀತ ನಿರ್ದೇಶಕ ವಿ.ಮನೋಹರ್ ನುಡಿದರು. ಗೋವಿನ ಮನಸ್ಸು ಅರ್ಥ ಮಾಡಿಕೊಳ್ಳುವ ಸಹೃದಯತೆ ನಮ್ಮಲ್ಲಿ ಬೆಳೆಯಬೇಕು. ಅಂಥ ಅಮಾಯಕ ಮನಸ್ಸನ್ನು ಕೊಲ್ಲುವ ಮನಸ್ಸು ವಿಕೃತ ಮನಸ್ಸು. ಅಂಥವರು ದೇಶಕ್ಕೆ ಬೇಕಿಲ್ಲ. ಗೋಪ್ರೇಮಿಗಳು ಹೆಚ್ಚಬೇಕು. ಮಕ್ಕಳಿಗೆ ಗೋವಿನ ಪ್ರೀತಿ, ಮಹತ್ವವನ್ನು ಹೇಳುವ ಪ್ರತಿಜ್ಞೆಯನ್ನು ಎಲ್ಲ ಪೋಷಕರು ಸ್ವೀಕರಿಸಿಬೇಕು. ಶ್ರೀಗಳ ಗೋಕೈಂಕರ್ಯಕ್ಕೆ ಇಡೀ ಸಮಾಜ ಬೆಂಬಲ ನೀಡಬೆಕು ಎಂದು ಮನವಿ ಮಾಡಿದರು. ಶಾಸಕ ರವಿ ಸುಬ್ರಹ್ಮಣ್ಯ ಮಾತನಾಡಿ, “ಗೋವಿನ ರಕ್ಷಣೆ ನಮ್ಮೆಲ್ಲರ ಕರ್ತವ್ಯ. ಕೆಲ ಸ್ವಯಂಘೋಷಿತ ಬುದ್ಧಿಜೀವಿಗಳು ನಮ್ಮ ಸನಾತನ ಸಂಸ್ಕøತಿಯನ್ನು ನಿಂದಿಸಿ ಪ್ರಚಾರ ಪಡೆಯುತ್ತಿದ್ದಾರೆ. ಗೋಸಂತತಿ ಉಳಿವಿಗೆ ನಡೆಯುವ ಅಭಿಯಾನದ ವಿರುದ್ಧವಾಗಿ ಮಾತನಾಡುವುದು ವಿಪರ್ಯಾಸ” ಎಂದರು. ಗೋಮಾತೆಯ ರಕ್ಷಣೆಗೆ ಯಾವ ತ್ಯಾಗಕ್ಕೂ ಸಿದ್ಧ ಎಂಬ ಸಂದೇಶವನ್ನು ಆಳುವವರಿಗೆ ತಲುಪಿಸುವ ಬೃಹದಾಂದೋಲನ ಇದಾಗಿದೆ. ಇದು ದೇಶದ ಮೂಲೆಮೂಲೆಗೂ ಪಸರಿಸಬೇಕು ಎಂದು ಸಲಹೆ ಮಾಡಿದರು. ಬಿಬಿಎಂಪಿಸದಸ್ಯ ವೆಂಕಟೇಶ್, ಶ್ಯಾಮಲಾ ಸಾಯಿಕುಮಾರ್, ಎ.ವಿ.ನಂದಿನಿ, ಜೆ.ಎಂ.ಸವಿತಾ ಮಾಯಣ್ಣ, ಕೆಂಪೇಗೌಡ, ಸಮಾಜಸೇವಕರಾದ ಇ..ಮಂಜುನಾಥ ರಾವ್, ಸಾಯಿಕುಮಾರ್, ಪಿಳ್ಳಪ್ಪ, ಉದ್ಯಮಿ ರುಕ್ಮಾಂಗದ ನಾಯ್ಡು ಮತ್ತಿತರರು ಉಪಸ್ಥಿತರಿದ್ದರು. ಕರ್ನಾಟಕ ರಕ್ಷಣಾ ವೇದಿಕೆಯ ಬೆಂಗಳೂರು ಘಟಕದ ಅಧ್ಯಕ್ಷ ಟಿ,ಎನ್.ಶಿವಾನಂದ ಶೆಟ್ಟಿ ಸಭಾಪೂಜೆ ನೆರವೇರಿಸಿದರು. ಅಭಯಾಕ್ಷರದಿಂದ ಪ್ರೇರಣೆ ಪಡೆದ ಮಹಿಳೆ ಝಾನ್ಸಿರಾಣಿ ಹಾಗೂ ಮಗ ರಾಣಾ ಪ್ರತಾಪ್ 200 ಹಸುಗಳನ್ನು ಸಾಕುವ ಕೈಂಕರ್ಯಕ್ಕೆ ಮುಂದಾದರು.

Read More

ಹಾಲುಹಬ್ಬ : 22-07-2017

ಏಡ್ಸ್ ಮಹಾಮಾರಿಗೆ ಗೋವಿನಲ್ಲಿ ಪರಿಹಾರ: ರಾಘವೇಶ್ವರ ಶ್ರೀ ವಿಜಯಾಬ್ಯಾಂಕ್ ಕಾಲೋನಿಯ ಆಟದ ಮೈದಾನದಲ್ಲಿ ನಡೆದ ಅಭಯಾಕ್ಷರ ಹಾಲುಹಬ್ಬ ಕಾರ್ಯಕ್ರಮ ಬೆಂಗಳೂರು: ಏಡ್ಸ್‍ಗೆ ಪರಿಹಾರ ಗೋವಿನಲ್ಲಿದೆ ಎನ್ನುವುದನ್ನು ಅಮೆರಿಕದ ಟೆಕ್ಸಾಸ್ ಎಎನ್‍ಎಂ ವಿಶ್ವವಿದ್ಯಾನಿಲಯದ ಸಂಶೋಧಕರುಕಂಡುಹಿಡಿದಿದ್ದಾರೆ ಎಂದು ಶ್ರೀರಾಮಚಂದ್ರಾಪುರಮಠದ ಶ್ರೀಶ್ರೀರಾಘವೇಶ್ವರಭಾರತೀಸ್ವಾಮೀಜಿ ಹೇಳಿದರು. ಶನಿವಾರ ಬನ್ನೇರುಘಟ್ಟ ರಸ್ತೆಯ ವಿಜಯಾಬ್ಯಾಂಕ್ ಕಾಲೋನಿಯ ಆಟದ ಮೈದಾನದಲ್ಲಿ ನಡೆದ ಅಭಯಾಕ್ಷರ ಹಾಲುಹಬ್ಬ ಕಾರ್ಯಕ್ರಮದಲ್ಲಿಸ್ವಾಮೀಜಿ ಆಶೀರ್ವಚನ ನೀಡಿದ ಅವರು, “ಟೆಕ್ಸಾಸ್ ಎಎನ್‍ಎಂ. ಇಂಟರ್‍ನ್ಯಾಷನಲ್ ಏಡ್ಸ್ ಪ್ರಿವೆನ್ಷನ್ ಇನೀಶಿಯೇಟಿವ್ ವಿವಿ, ಸ್ಕ್ರಿಪ್ಸ್ಸಂಶೋಧನಾ ಕೇಂದ್ರದ ಸಂಶೋಧಕರು ಈ ಕುರಿತ ನಿರ್ಧಾರಕ್ಕೆ ಬಂದಿದ್ದಾರೆ. ಕರುವಿನ ಶರೀರಕ್ಕೆ ಏಡ್ಸ್ ವೈರಸ್‍ಗಳನ್ನು ನೀಡಿದಾಗ, ಅದುಕರುವಿನ ಶರೀರದಲ್ಲಿ ಬದುಕುವುದಿಲ್ಲ ಎನ್ನುವುದನ್ನು ವಿಜ್ಞಾನಿಗಳು ಸಂಶೋಧನೆ ಮೂಲಕ ದೃಢಪಡಿಸಿದ್ದಾರೆ. ಈ ಪ್ರತಿರೋಧವನ್ನು ಹಸುವಿನಶರೀರದಿಂದ ಪ್ರತ್ಯೇಕಿಸಿ, ಲಸಿಕೆರೂಪದಲ್ಲಿ ನೀಡಬಹುದು ಎಂದು ಸಾಬೀತುಪಡಿಸಿದ್ದಾರೆ” ಎಂದು ವಿವರಿಸಿದರು. ನೇಚರ್ ನಿಯತಕಾಲಿಕದಲ್ಲಿ ಪ್ರಕಟವಾದ ಲೇಖನವನ್ನು ಉಲ್ಲೇಖಿಸಿ ಫೈನಾನ್ಶಿಯಲ್ ಟೈಮ್ಸ್ ವರದಿ ಮಾಡಿರುವುದನ್ನು ಸ್ವಾಮೀಜಿಉದಾಹರಿಸಿದರು. ಏಡ್ಸ್ ನಿಯಂತ್ರಿಸುವ ರೋಗನಿವಾರಕ ಶಕ್ತಿ ಗೋಮೂತ್ರ, ಗೋಮಯ, ಗೋವಿನ ಹಾಲಿನಲ್ಲಲ್ಲ; ಗೋವಿನ ಶರೀರದಲ್ಲಿದೆಎಂದು ಹೇಳಿದರು. ನಮ್ಮ ದೇಶದ ಅತ್ಯುತ್ತಮ ತಳಿಗಳ ಮೇಲೆ ಈ ಪರೀಕ್ಷೆ ಮಾಡಿದರೆ, ನೂರು ಪಟ್ಟು ಉತ್ತಮ ಫಲಿತಾಂಶ ಪಡೆಯಬಹುದು ಎಂದುಅಭಿಪ್ರಾಯಪಟ್ಟರು. ಗೋವುಗಳನ್ನು ಉಳಿಸಿಕೊಳ್ಳುವುದು ಕೋಮುವಾದ, ಅಂದಾಭಿಮಾನ ಅಥವಾ ಮೂಢನಂಬಿಕೆಯೇ ಎಂದು ಪ್ರಶ್ನಿಸಿದರು. ಸರ್ಕಾರಗಳೇ ಕಸಾಯಿಖಾನೆಗಳನ್ನು ಪೋಷಿಸಲು ನಿಂತಿದೆ. ಮಾಂಸದ ಲಾಬಿ ಎಲ್ಲೆಡೆ ಕೈಚಳಕ ತೋರಿಸುತ್ತಿದೆ. ಇದರ ವಿರುದ್ಧ ಹೋರಾಟಮಾಡಿ ಗೋವನ್ನು ಉಳಿಸಿಕೊಳ್ಳುವುದು ಸವಾಲಿನ ಕೆಲಸ. ವಿನೋಬಾಭಾವೆಯವರ ದೇಹಾಂತವಾಗಿರುವುದು ಗೋವಿನ ಕಾರಣಕ್ಕೆ. ರಾಜೀವ್ದೀಕ್ಷಿತ್ ಅವರ ಅಸಹಜ ಮರಣಕ್ಕೂ ಇದೇ ಕಾರಣ. ಇಂಥ ಹಲವಾರು ಮಂದಿ ಗೋಪರ ಹೋರಾಟಗಾರರು ಇಂಥ ಲಾಬಿಗಳ ಕಾರಣದಿಂದಕಷ್ಟ ನಷ್ಟ ಅನುಭವಿಸಿದ್ದಾರೆ. ಗೋವಿನ ಸಮಸ್ಯೆಗೆ ಪರಿಹಾರ ಇರುವುದು ಜನರ ಬಳಿ. ಆದ್ದರಿಂದ ಜನರ ಬಳಿಗೆ ಮಠ ತೆರಳಿ, ಗೋಜಾಗೃತಿಮೂಡಿಸುವ ಪ್ರಯತ್ನ ಇದು ಎಂದು ವಿವರಿಸಿದರು. ಅಧಿಕಾರಿಗಳು, ರಾಜಕಾರಣಿಗಳು ವಿಷಚಕ್ರದಿಂದ ಹೊರಬಂದು ಜನಚಳವಳಿ ಕಟ್ಟೋಣ.ಗೋರಕ್ಷಣೆ ನಾವು ಬೇಡುವ ಭಿಕ್ಷೆಯಲ್ಲ; ಅದು ಭಾರತದ ಪ್ರಜೆಗಳ ಹಕ್ಕೊತ್ತಾಯ ಎಂದು ವಿಶ್ಲೇಷಿಸಿದರು. ಕಿಂಚಿತ್ ಸ್ವಾರ್ಥವೂ ಇಲ್ಲದ ನಿಜವಾದ ಅಮ್ಮ. ಗೋಸೇವೆಗೆ ಮುಂದಾಗುವ ಎಲ್ಲರೂ ನಿಜವಾದ ತಾಯಿಯ ನಿಜವಾದ ಮಕ್ಕಳು. ತಾಯಿಗೆ ಕಷ್ಟಬಂದಾಗ ಸ್ಪಂದಿಸದ ಯಾರೂ ನಿಜವಾದ ಮಕ್ಕಳಲ್ಲ. ಹೆತ್ತಮ್ಮನ ಕರೆಗೆ ಸ್ಪಂದಿಸಿ ದೊಡ್ಡ ಸಂಖ್ಯೆಯ ಮಕ್ಕಳು ಸೇರಿದ್ದೀರಿ ಎಂದು ಹೇಳಿದ್ದಾರೆ. ಗೋಮಾತೆಯ ಎಲ್ಲ ಅಂಶಗಳೂ ಭೂಮಿಗೆ ಸೇರಿದರೆ ಭೂಮಿಯಲ್ಲಿ ಚಿನ್ನ ಬೆಳೆಯುತ್ತದೆ. ಬಂಜರು ಭೂಮಿಯನ್ನು ಹಸಿರಾಗಿಸುತ್ತದೆ. ಗೋವನ್ನುಉಳಿಸುವುದೇ ಭೂಮಿಗೆ ನೀಡಬಹುದಾದ ದೊಡ್ಡ ಕೊಡುಗೆ ಎಂದು ಬಣ್ಣಿಸಿದರು. ಶಾಸಕ ಸತೀಶ್ ರೆಡ್ಡಿ ಮಾತನಾಡಿ, ವ್ಯವಸಾಯ ಬೆಂಗಳೂರಿನಿಂದ ನಶಿಸಿದ್ದು, ಬೆಂಗಳೂರು ಐಟಿ-ಬಿಟಿ ಹಬ್ ಆಗಿ ಬೆಳೆಯುತ್ತಿದೆ. ಆದರೆಎಲ್ಲರೂ ಹಳ್ಳಿಗಳಿಂದ ಬಂದವರೇ. ಎಲ್ಲರೂ ಗೋವಿನ ಹಾಲು ಕುಡಿದು ಬಂದವರೇ. ಆದರೆ ಇಂದು ಸರ್ಕಾರಗಳು ಗೋರಕ್ಷಣೆಗೆ ಒತ್ತು ನೀಡುವಬದಲು ಗೋವುಗಳನ್ನು ಕಸಾಯಿಖಾನೆಗೆ ಕಳುಹಿಸುವ ಕಾರ್ಯಕ್ಕೆ ಕುಮ್ಮಕ್ಕು ನೀಡುತ್ತಿವೆ. ಗೋವಿನ ಮೇಲೆ ಕ್ರೌರ್ಯ ಹೆಚ್ಚುತ್ತಿದೆ. ಭಾರತದಸಂಸ್ಕøತಿಯನ್ನು ಒಡೆಯುವ ಹುನ್ನಾರ ನಡೆದಿದೆ. ಆದರೆ ಇದನ್ನು ಕಾಪಾಡಲು ಸಾಧುಸಂತರು ಗಣನೀಯ ಸೇವೆ ಸಲ್ಲಿಸುತ್ತಿದ್ದಾರೆ. ಗೋವಧೆಗೆಪ್ರೋತ್ಸಾಹಿಸುವ ಸರ್ಕಾರಗಳಿಗೆ ತಕ್ಕ ಪಾಠ ಕಲಿಸಿ ಎಂದು ಕರೆ ನೀಡಿದರು. ರಾಜ್ಯಾದ್ಯಂತ ರೈತರು ಕಂಗಾಲಾಗಿದ್ದಾರೆ. ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಪಶುಪಾಲನೆಗೆ ಪ್ರೋತ್ಸಾಹ ನೀಡುವ ಮೂಲಕ ರೈತರ ನೆರವಿಗೆಸರ್ಕಾರಗಳು ಬರಬೇಕು. ಗೋಸಂರಕ್ಷಣೆಗೆ ಪೂರಕವಾಗುವ ಕಟ್ಟುನಿಟ್ಟಿನ ಕಾನೂನು ಜಾರಿಗೆ ಬರಬೇಕು ಎಂದು ಆಗ್ರಹಿಸಿದರು. ಯಾವಸರ್ಕಾರಗಳೂ ಧರ್ಮ ಹಾಗೂ ಸಂಸ್ಕøತಿ ಜತೆ ಚೆಲ್ಲಾಟವಾಡಬಾರದು ಎಂದು ಮನವಿ ಮಾಡಿದರು. ಹಾಲುಹಬ್ಬದಂಥ ಕಾರ್ಯಕ್ರಮಗಳುಗೋಸಂರಕ್ಷಣೆಗೆ ಪ್ರೇರಕಶಕ್ತಿಯಾಗಲಿ ಎಂದು ಆಶಿಸಿದರು. ಹಾಲುಹಬ್ಬ ಸಂಚಾಲನಾ ಸಮಿತಿ ಕಾರ್ಯಾಧ್ಯಕ್ಷ ಸುಖಾನಂದ ಶೆಟ್ಟಿ, ಶ್ರೀಧರ ಹೆಗಡೆ ಗೋಸಂದೇಶ ನೀಡಿದರು. ಸುರೇಂದ್ರ ಶೆಟ್ಟಿ, ಪಾಲಿಕೆಸದಸ್ಯರು, ಪಾಲಿಕೆ ಸದಸ್ಯ ನಾರಾಯಣರಾಜು, ಮಾಜಿ ಸದಸ್ಯ ಚಂದ್ರಶೇಖರರಾಜು, ವಿರೇಂದ್ರ ಶೆಟ್ಟಿ, ಲೋಕೇಶ್, ಶ್ರೀಧರಮೂರ್ತಿ, ಚಂದ್ರುಶಾನುಭಾಗ್ ಮತ್ತಿತರರು ಉಪಸ್ಥಿತರಿದ್ದರು. ಗೋಕಿಂಕರ ಕವಚವನ್ನು ಶಾಸಕ ಸತೀಶ್ ರೆಡ್ಡಿಯವರಿಗೆ ತೊಡಿಸುವ ಮೂಲಕ ಶ್ರೀ ಸ್ವಾಮೀಜಿಲೋಕಾರ್ಪಣೆ ಮಾಡಿದರು. ಶ್ರೀಶ್ರೀ ರಾಘವೇಶ್ವರಭಾರತೀಮಹಾಸ್ವಾಮೀಜಿಯವರ ವಿಶಿಷ್ಟ ಪರಿಕಲ್ಪನೆಯಾದ ಅಭಯಾಕ್ಷರ- ಹಾಲುಹಬ್ಬ, ವಾರಾಂತ್ಯದಲ್ಲಿ ರಾಜಧಾನಿಯಜನರಿಗೆ ವಿಶಿಷ್ಟ ಅನುಭವ ನೀಡಿತು. ಗೋಪೂಜೆ, ಗೋದೀಕ್ಷೆ, ಅಕ್ಷರದೀಕ್ಷೆ, ಗೋಗ್ರಾಸ, ಗೋವಿಚಾರ, ಪ್ರಸ್ತುತಿ, ಅಭಯಾಕ್ಷರ, ಗೋಕಲೆ, ಗವ್ಯೋತ್ಪನ್ನಗಳ ಪ್ರದರ್ಶನ ಮತ್ತು ಮಾರಾಟ, ರಥಯಾತ್ರೆಯನ್ನೊಳಗೊಂಡ ವಿಶಿಷ್ಟ ಕಾರ್ಯಕ್ರಮ ಜನಮನ ಸೂರೆಗೊಂಡಿರು. ಕಾರ್ಯಕ್ರಮದಲ್ಲಿ ಪಾಲ್ಗೊಂಡ ಸಾವಿರಾರು ಮಂದಿಗೆ ಪರಿಶುದ್ಧ ದೇಸಿಹಾಲಿನ ಅಮೃತವನ್ನು ಉಚಿತವಾಗಿ ವಿತರಿಸಲಾಯಿತು. ಗಾಯಕಶಶಿಧರ ಕೋಟೆ ಗೋವಿನ ಬಗ್ಗೆ ಸ್ವರಚಿತ ಗೀತೆ ಹಾಡಿದರು. ಕಾರ್ಯಕ್ರಮಕ್ಕೆ ಮುನ್ನ ಸುತ್ತಮುತ್ತಲ ಪ್ರದೇಶಗಳಲ್ಲಿ ಎತ್ತಿನಗಾಡಿಗಳ ಮೆರವಣಿಗೆಮತ್ತು ಗೋರಥ ಸಂಚರಿಸಿ ಗೋಜಾಗೃತಿ ಮೂಡಿಸಿತು.

Read More

11 ನೇ ದಿನದ ಸುದ್ದಿ : 19-07-2017

ಗಿರಿನಗರದ ಶ್ರೀರಾಮಚಂದ್ರಾಪುರಮಠದಲ್ಲಿ ‘ರಾಮಪದ’ ಎಂಬ ಸಹಜ ಸತ್ಸಂಗ ಕಾರ್ಯಕ್ರಮ ನಡೆಯಿತು. ಭಕ್ತಿಪ್ರಧಾನವಾದ ಗಾಯನ ಹಾಗೂ ಪ್ರವಚನದ ಸಮ್ಮಿಲನದ ಈ ವಿಶಿಷ್ಟ ಕಾರ್ಯಕ್ರಮವನ್ನು ರಾಮಚಂದ್ರಾಪುರಮಠದ ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳು ನಡೆಸಿಕೊಟ್ಟರು. ಸ್ಮರಣೆಯು ದೇವರನ್ನು ಸಮೀಪಿಸಲು ಸುಲಭದ ಮಾರ್ಗವಾಗಿದ್ದು, ದೇವರನ್ನು ಸ್ಮರಿಸಲು ಕಷ್ಟಪಡಬೇಕಾಗಿಲ್ಲ, ಶುದ್ಧ ಮನಸ್ಸಿನಿಂದ ಒಮ್ಮೆ  ರಾಮನ ಪದವನ್ನು ಸ್ಮರಿದಿದರು ಅನಂತ ಪುಣ್ಯಗಳಿಸಬಹುದು ಎಂದು ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳು ಹೇಳಿದರು. ಯಾವ ಕೆಲಸವನ್ನು ಮಾಡಿತ್ತಿರುತ್ತೇವೋ ಆ ಕುರಿತಾದ ಸ್ಮರಣೆ ಇರಬೇಕು. ಮನೆಯಲ್ಲಿ ಇರುವಾಗ ಕೆಲಸದ ನೆನಪು,…

Read More