ಕಟುಕರಿಂದ ರಕ್ಷಿಸಿ ಕಾಯುವ ಕೈಗೆ ಗೋವುಗಳನ್ನು ಒಪ್ಪಿಸೋಣ : ರಾಘವೇಶ್ವರ ಶ್ರೀ * 1,15,000 ಅಭಯಾಕ್ಷರ ಅರ್ಜಿಗಳನ್ನು ಶ್ರೀಗಳಿಗೆ ಸಮರ್ಪಿಸಲಾಯಿತು. * ಶಾಸಕ ಮುನಿರಾಜು, ಯೋಗಗುರುಗಳಾದ ಉಮಾಮಹೇಶ್ವರ್ ಉಪಸ್ಥಿತಿ. ನಮ್ಮೆಲ್ಲರ ಬದುಕಿನ ಹಿಂದೆ ಮೌನದಲ್ಲಿ ಮಾತಾಡುವ ಗೋಮಾತೆ ಇದ್ದಾಳೆ. ಸಕಲ ಶುಭಗಳ ಸಾಗರ ಗೋಮಾತೆಯಾಗಿದ್ದಾಳೆ ಎಂದು ಶ್ರೀರಾಮಚಂದ್ರಾಪುರಮಠದ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳು ಹೇಳಿದರು. ಟಿ.ದಾಸರಹಳ್ಳಿಯ ವಾಸ್ಕ್ ಯೋಗಕೇಂದ್ರದಲ್ಲಿ ನೆಡೆದ ಅಭಯಾಕ್ಷರ ಹಾಲುಹಬ್ಬ ಕಾರ್ಯಕ್ರಮವನ್ನುದ್ದೇಶಿಸಿ ಗೋಸಂದೇಶ ನೀಡಿದ ರಾಘವೇಶ್ವರ ಶ್ರೀಗಳು, ಗೋವಿನ ಪರ ಹಲವರು, ಗೋವಿನ ವಿರುದ್ಧ ಇರುವವರು ಕೆಲವರು…